
ಬೆಂಗಳೂರು: ಲೈವ್ ಕನ್ನಡ ಮತ್ತು ಲೈವ್ ಇಂಡಿಯಾ ಸುದ್ದಿ ಪೋರ್ಟಲ್ಗಳ ಆಡಳಿತ ಮಂಡಳಿ ಬಾಲಾಜಿ ಮೀಡಿಯಾ ಗ್ರೂಪ್ನ ನಿರ್ದೇಶಕಿ, ಹರಿಶ್ರೀ ಮೆಹ್ತಾ ಅವರು ಶುಕ್ರವಾರ ಬೆಂಗಳೂರು ಕಚೇರಿಗೆ ಭೇಟಿ ನೀಡಿದರು.


ಈ ಸಂದರ್ಭದಲ್ಲಿ ಬಾಲಾಜಿ ಮೀಡಿಯಾ ಗ್ರೂಪ್ ಸಲಹೆಗಾರರು ಮತ್ತು ಪ್ರಧಾನ ಸಂಪಾದಕರಾದ ಶಶಿಧರ್ ಭಟ್ ಅವರು ಹೂಗುಚ್ಛ ನೀಡಿ, ಸಿಬ್ಬಂದಿ ಪರವಾಗಿ ಸ್ವಾಗತಿಸಿದರು. ಬಳಿಕ ಅವರು ಸಿಬ್ಬಂದಿಯನ್ನು ಪರಿಚಯಿಸಿದರು.
ಕಚೇರಿಯನ್ನು ವೀಕ್ಷಿಸಿದ ಹರಿಶ್ರೀ ಮೆಹ್ತಾ ಅವರು ಸಂತಸ ವ್ಯಕ್ತಪಡಿಸಿ, ಸಿಬ್ಬಂದಿಗೆ ಶುಭ ಕೋರಿದರು. ಆದಷ್ಟು ಬೇಗ ಟಿವಿ ವಾಹಿನಿಯನ್ನೂ ಪ್ರಾರಂಭಿಸಲು ಸಿದ್ಧರಾಗಿ ಎಂದು ಅವರು ಸೂಚಿಸಿದರು.



