Breaking Newsಇತರ ಕ್ರೀಡೆಕ್ರೀಡೆ

ಬಾರ್ಸಿಲೋನಾಕ್ಕೆ ಕಣ್ಣೀರಿನ ವಿದಾಯ ಹೇಳಿದ ಲಿಯೋನೆಲ್ ಮೆಸ್ಸಿ

ಬಾರ್ಸಿಲೋನಾ : ಬಹಳ ವರ್ಷಗಳ ಕಾಲ ತಂಗಿದ್ದ ಬಾಡಿಗೆ ಮನೆಯನ್ನೇ ಬಿಟ್ಟು ಹೋಗುವಾಗ ಅಲ್ಲಿ ಅಗಲುವಿಕೆಯ ನೋವು ನಮ್ಮನ್ನು ಕಾಡುತ್ತದೆ. ಹಾಗಿರುವಾಗ 17 ವರ್ಷಗಳ ಕಾಲ ಬದುಕು ನೀಡಿದ ಫುಟ್ಬಾಲ್ ಕ್ಲಬ್ ನ್ನು ಬಿಟ್ಟು ಹೋಗುವಾಗ ಅಲ್ಲಿ ಕಣ್ಣೀರು ಮನೆ ಮಾಡುವುದು ಸಹಜ.

ಜಗತ್ತಿನ ಶ್ರೇಷ್ಠ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭಾನುವಾರ ಬಾರ್ಸಿಲೋನಾ ಕ್ಲಬ್ ತೊರೆದು ಹೋಗುವಾಗ ಕಣ್ಣೀರಿಟ್ಟರು. ಮೌನ ಆವರಿಸಿದ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರು ಮತ್ತು ಎದ್ದು ನಿಂತು ಚಪ್ಪಾಳೆ ಹೊಡೆಯುವ ದೃಶ್ಯ ಮಾತ್ರ ಕಂಡುಬಂತು.

ವಿಶ್ವಕಪ್ ನಲ್ಲಿ ಅರ್ಜಿಂಟೀನಾ ಫೈನಲ್ ನಲ್ಲಿ ಸೋತಾಗ ಮೆಸ್ಸಿ ಕಣ್ಣೀರಿಟ್ಟಿದ್ದರು…..ಅದು ಬಿಟ್ಟರೆ ಅವರಲ್ಲಿ ನಾವು ಕಂಡಿದ್ದು ಆನಂದ ಭಾಷ್ಪ ಮಾತ್ರ. ತನ್ನ ಗುತ್ತಿಗೆಯ ಹಣದಲ್ಲಿ ಶೇ 50ರಷ್ಟು ಮಾತ್ರ ಕೊಟ್ಟರೆ ಸಾಕು ಬಾರ್ದಿಲೋನಾದಲ್ಲಿ ಆಡಿ ಇಲ್ಲಿಂದಲೇ ವಿದಾಯ ಹೇಳುತ್ತೇನೆ ಎಂಬ ಆಶಯವನ್ನು ಮೆಸ್ಸಿ ವ್ಯಕ್ತಪಡಿಸಿದರೂ ಸ್ಪೇನ್ ನ ಕ್ಲಬ್ ನಿಯಮ ಅದಕ್ಕೆ ಅವಕಾಶ ನೀಡಲಿಲ್ಲ.
17 ವರ್ಷಗಳಲ್ಲಿ 778 ಪಂದ್ಯಗಳನ್ನಾಡಿ 672 ಗೋಲುಗಳನ್ನು ಗಳಿಸಿ 305 ಗೋಲುಗಳನ್ನು ಗಳಿಸಲು ನೆರವಾಗಿರುವ ಮೆಸ್ಸಿ ಭಾನುವಾರ ಅತ್ಯಂತ ಭಾರವಾದ ಹೆಜ್ಜೆಗಳೊಂದಿಗೆ ಬಾರ್ಸಿಲೋನಾ ಕ್ಲಬ್ ನಿಂದ ಹೊರ ನಡೆದರು.

“ನಾನು ಈ ಕ್ಲಬ್ ಅನ್ನು ತೊರೆದು ಹೋಗುತ್ತೇನೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ. ಈ ಕ್ಲಬ್ ನನಗೆ ಎಲ್ಲವನ್ನೂ ನೀಡಿದೆ. ಮೊದಲ ದಿನದಿಂದ ಇಲ್ಲಿಯವರೆಗೆ ಕ್ಲಬ್ ನ ಜೆರ್ಸಿ ಧರಿಸಿ ಆಡುವಾಗ ನೀವು ತೋರಿದ ಪ್ರೀತಿ ಅಪಾರ” ಎಂದು ಮೆಸ್ಸಿ ಚಿಕ್ಕ ಮಗುವಿನಂತೆ ಅತ್ತು ಹೊರನಡೆದರು.

Spread the love

Related Articles

Leave a Reply

Your email address will not be published. Required fields are marked *

Back to top button