ಬಾಗಲಕೋಟೆ

ಪುನರ್ವಸತಿಗಾಗಿ ಗಿಡ ನೆಲಸಮ; ತೇರದಾಳ ಶಾಸಕ ಸಿದ್ದು ಸವದಿ ವಿರುದ್ಧ ಜೈನ ಮುನಿ ಆಕ್ರೋಶ

ಬಾಗಲಕೋಟೆ: ಹಳಂಗಳಿಯ ಭದ್ರಗಿರಿ ಬೆಟ್ಟದ ಜೈನ ಮುನಿ ಕುಲರತ್ನಭೂಷಣ ಮಹಾರಾಜ ಅವರು ಭದ್ರಗಿರಿ ಬೆಟ್ಟದಲ್ಲಿ ತಮದಡ್ಡಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಜಾಗದಲ್ಲಿ ಮರಗಳನ್ನು ಕಡಿದಿರುವದಕ್ಕೆ ಶಾಸಕ ಸಿದ್ದು ಸವದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ ತಮದಡ್ಡಿ ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿಗಾಗಿ ಹಳಿಂಗಳಿ ಗ್ರಾಮದ ಗುಡ್ಡದಲ್ಲಿ 89ಎಕರೆ ಜಾಗ ಪುನರ್ವಸತಿ ಕೇಂದ್ರ ನಿರ್ಮಿಸಲು ಜಾಗ ಗುರುತಿಸಲಾಗಿದೆ. ಈ ಜಾಗದಲ್ಲಿ ಗಿಡಮರಗಳನ್ನು ಬೆಳೆಸಲಾಗುತ್ತಿದೆ. ಆದರೆ ಶಾಸಕ ಸಿದ್ದು ಸವದಿ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಗಿಡಮರಗಳನ್ನು ನಾಶಮಾಡಿಸುತ್ತಿದ್ದಾರೆ‌.ಬಿಜೆಪಿಯವರು ದೇಶ, ಸಂಸ್ಕೃತಿ, ಪರಿಸರ ರಕ್ಷಣೆ ಮಾಡ್ತಾರೆ ಎನ್ನುತ್ತಾರೆ. ಆದರೆ ಸಿದ್ದು ಸವದಿ ಗಿಡಮರಗಳನ್ನು ನಾಶಮಾಡುವ ನಾಲಾಯಕ್ ಎಂದು ವಿಡಿಯೋ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಉಮಾಶ್ರೀ ಶಾಸಕರಾಗಿದ್ದಾಗ ಮಂಜೂರು ಮಾಡಿದ್ದು ಎನ್ನುತ್ತಾರೆ.ಆದರೆ ಸಿದ್ದು ಸವದಿ ಈಗ ಪ್ರಸ್ತುತ ಸರ್ಕಾರದಲ್ಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಹಳಂಗಳಿ ಗುಡ್ಡದ ಪುನರ್ವಸತಿ ಜಾಗ ವಿಚಾರವಾಗಿ ತಮದಡ್ಡಿ , ಹಾಗೂ ಹಳಂಗಳಿ ಗ್ರಾಮದ ಮಧ್ಯೆ ಜಗ್ಗಾಟ ನಡೆದಿದೆ.ಈ ಮಧ್ಯೆ ಭದ್ರಗಿರಿ ಬೆಟ್ಟದ ಜೈನಮುನಿ ವಿಡಿಯೋ ಮೂಲಕ ಆಕ್ರೋಶ ವ್ಯಕ್ತಪಡಿಸಿ, ಪರೋಕ್ಷವಾಗಿ ಹಳಿಂಗಳಿ ಬೆಟ್ಟದಲ್ಲಿ ಪುನರ್ವಸತಿ ಕಲ್ಪಿಸುವುದಕ್ಕೆ ವಿರೋಧಿ‌ಸಿದ್ದಾರೆ ಎನ್ನಲಾಗಿದೆ.

ಜೈನಮುನಿ‌ ಕುಲರತ್ನಭೂಷಣ ಮಹಾರಾಜ ಚಾತುರ್ಮಾಸ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಕಟಣಿಯಲ್ಲಿದ್ದಾರೆ. ಆದ್ರೆ ಬೆಟ್ಟದಲ್ಲಿ ಮರಗಿಡಗಳನ್ನು ಕಿತ್ತೆಸೆದಿರುವ ವಿಷಯ ತಿಳಿಯುತ್ತಿದ್ದಂತೆ ವಾಟ್ಸಾಪ್ ಮೂಲಕ ತೇರದಾಳ ಶಾಸಕ ಸಿದ್ದು ಸವದಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಗಿಡಗಳನ್ನು ಉರುಳಿಸಿದ್ದು ಬೇಸರ ತರಿಸಿದೆ. ಶಾಸಕ ಸಿದ್ದು ಸವದಿ ವರ್ತನೆಯಿಂದ ಬೇಸರವಾಗಿದೆ. ಸಿದ್ದು ಸವದಿ ಅವರಿಗೆ ಮಾನವೀಯತೆ ಎಲ್ಲಿದೆ? ಗಿಡಮರ ಬೆಳೆಸಿದ ಜಾಗ ಬಿಟ್ಟು ಬೇರೆಡೆ ಸಂತ್ರಸ್ತರಿಗೆ ಜಾಗ ಕೊಡಿ ಎಂದು ಜೈನಮುನಿ‌ ಮನವಿ ಮಾಡಿಕೊಂಡಿದ್ದಾರೆ.

ಜೈನಮುನಿಗಳು ಶಾಪ ಕೊಡೋದಿಲ್ಲ. ಆದರೆ ನಿಮ್ಮ ವರ್ತನೆಯಿಂದ ನೀವು ಮಾಡಿದ ಕರ್ಮ ನಿಮಗೆ ತಟ್ಟದೆ ಇರೋದಿಲ್ಲ. ಇಂತಹ ನೀಚತನದಿಂದ ಭಾರತದ ನಾಗರೀಕತೆ ಹಾಳಾಗಿ ಹೋಗುತ್ತಿದೆ. ಸಸ್ಯ ಸಂಪತ್ತು ಹಾಳು‌ ಮಾಡುವುದು ಸರಿಯಲ್ಲ. ಇಂತಹ ನಾಲಾಯಕ್ ಕೆಲಸ‌ ಮಾಡೋದು ಸರಿಯಲ್ಲ. ಕಲ್ಲು ಮುಳ್ಳು ಇರುವ ಗುಡ್ಡದಲ್ಲಿ ಮರಗಳ ಬೆಳೆಸಿದ್ದೇವೆ. ನಿಮಗೆ ಮಾನವೀಯತೆ ಇಲ್ಲವೇ ಎಂದು ಜೈನಮುನಿ ಆಕ್ರೋಶ ಹೊರ ಹಾಕಿದ್ದಾರೆ.

ನಾವು ಚಾತುರ್ಮಾಸದಲ್ಲಿ ಇದ್ದೀವಿ ಅದಕ್ಕೆ ಸುಮ್ಮನೆ ಇದ್ದೀವಿ. ಇಲ್ಲದಿದ್ದರೆ ನಾವು ಹೋರಾಟ ಮಾಡುತ್ತಿದ್ದೆವು. ಪ್ರತಿಭಟನೆ ಮಾಡುತ್ತಿದ್ದಂತಹ ಹೆಣ್ಣು‌ಮಕ್ಕಳ ಮೇಲೆ ಹಲ್ಲೆ ಮಾಡಲಾಗಿದೆ. ಅವರು ಆಸ್ಪತ್ರೆ ಸೇರಿದ್ದಾರೆ. ನೀತಿ ಧರ್ಮ ನಿಮ್ಮ ಹತ್ತಿರ ಇದೆಯಾ? ಸಿದ್ದು ಸವದಿ ಬಂದು ಗಿಡ ಹಾಕಿದ್ದರು. ಈಗ ಅವರೇ ಜೆಸಿಬಿ ಮೂಲಕ ಕಿತ್ತೆಸೆಯುತ್ತಿದ್ದಾರೆ. ಇದು ಅವರಿಗೆ ನಾಚಿಕೆ ಆಗಬೇಕು. ಇದೇ ಜಾಗದಲ್ಲಿ ಸಾಕಷ್ಟು ಜಾಗ ಖಾಲಿ ಇದೆ. ಅಲ್ಲಿ ಸಂತ್ರಸ್ತರಿಗೆ ಜಾಗ ಕೊಡಿ ಎಂದಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button